Saturday, 27 August 2011

ಇದು ನಮ್ಮ ದುರಾದೃಷ್ಟವಾ????????????????

 ಇದು ನಮ್ಮ ದುರಾದೃಷ್ಟವಾ????????????????
ಇವತ್ತಿನ ಸ್ಥಿತಿ ನೋಡುತ್ತಿದ್ದರೆ   ಈ ಅನುಮಾನ  ಮೂಡುವುದು.
ದಿನಾಂಕ 27-8-2011ರಂದು ಬೆಳಿಗ್ಗೆ ಸುವರ್ಣ 24 * 7 ವಾಹಿನಿಯಲ್ಲಿ ವರದಿಯೊಂದು ಬಂತು
ಭಾನುವಾರದ ರಾತ್ರಿ 9-30ಕ್ಕೆ  ಪ್ರಸಾರ ವಾಗುವ ಟಾರ್ಗೆಟ್ ಕಾರ್ಯಕ್ರಮದ "ಟ್ರೈಲರ್ ನಂತೆ ಒಂದು ವರದಿ
"ಸನ್ಮಾನ್ಯಶ್ರೀ ಹೆಚ್. ಡಿ. ಕುಮಾರಸ್ವಾಮಿಯವರ ಸಂದರ್ಶನದಲ್ಲಿ "ಸಂತೋಷ್ ಹೆಗಡೆಯವರ ಬಗ್ಗೆ ಹೇಳಿದ ಕೆಲವು ತುಣುಕುಗಳು
ಸಂತೋಷ್ ಹೆಗಡೆಯವರು ರಾತ್ರಿಯ ಕಾರ್ಯಾಚರಣೆಗೆ  ಹಣ ಹೇಗೆ ಬರುತ್ತೆ? ಸಂಬಳದಿಂದ ಎಲ್ಲವನ್ನು ಮಾಡಲೂ ಸಾಧ್ಯವೇ? 
ಈ ದೇಶದಲ್ಲಿ  ಯಾರೂ ಪ್ರಾಮಾಣಿಕರಲ್ಲ. ಎಂಬ ತುಣುಕುಗಳನ್ನು ಸುವರ್ಣದಲ್ಲಿ ಪ್ರಸಾರ ಮಾಡಲಾಯಿತು.
(ಪೂರ್ಣ ವಿವರಗಳು ಭಾನುವಾರ ರಾತ್ರಿ 9-30 ಕ್ಕೆ "ಟಾರ್ಗೆಟ್" ನಲ್ಲಿ)
ನಮ್ಮ ರಾಜಕಾರಣಿಗೇನಾಗಿದೆ. ಸಂತೋಷ್ ಹೆಗಡೆಯವರು ಅಧಿಕಾರಿದಲ್ಲಿದ್ದಾಗ  ಅವರನ್ನು ಚಿನ್ನ, ರನ್ನ,  ಅಂತ ಹೊಗಳುತ್ತಾರೆ.
ಈಗ  ಅವರ ವ್ಯಕ್ತಿತ್ವದ ಮೇಲೆಯೇ ಪ್ರಹಾರ,   ಒಂದು ಕಡೆ ಕಾಂಗ್ರೇಸ್ನವರು, ಬಿಜೆಪಿಯವರು, ಇವರನ್ನು ವಿರೋಧಿಸುತ್ತಿದ್ದವರು. ಈಗ ಮಾತಾನಾಡುತ್ತಿರುವುದು ನೋಡಿದರೆ. ನಮಗೆ ನಮ್ಮ  ವ್ಯವಸ್ಥೆಯ ಮೇಲೇಯೇ ಅಸಹ್ಯವಾಗುತ್ತಿದೆ.
ನಮ್ಮ ರಾಜ್ಯದಲ್ಲಿ ನಮ್ಮ ಮುಂದೆ ಭ್ರಷ್ಟಾಚಾರದ ವಿರುದ್ಧ ಸೆಟೆದುನಿಂತು ಕಾರ್ಯಾಚರಣೆ ಮಾಡಿದ ವ್ಯಕ್ತಿ ಸಂತೋಷ್ ಹೆಗಡೆಯವರು, ನಿವೃತ್ತಿಯ ನಂತರ ತಮ್ಮ ಪಾಡಿಗೆ ಇರದೇ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಇಂತಹ ವ್ಯಕ್ತಿಯೊಬ್ಬರು ನಮ್ಮ ರಾಜ್ಯಕ್ಕೆ ಆಶಾಕಿರಣವಾಗುತ್ತಿದ್ದಾರೆ.  ಇಂತಹವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆಯಾ? 
ಸನ್ಮಾನ್ಯಶ್ರೀ ಕುಮಾರಸ್ವಾಮಿಯವರಿಗೆ ಬಹಳ  ಆತುರ, 
*ಶಾಸಕರಾಗಿ 20 ತಿಂಗಳಿಗೆ ಮುಖ್ಯಮಂತ್ರಿಯಾಗುವಾಸೆ, 
* 20 ತಿಂಗಳ ನಂತರ  ಅಧಿಕಾರ ಬಿಡುವಾಗ ಕಸಿವಿಸಿ
* ಜನರು ಕೊಟ್ಟ ತೀರ್ಪನ್ನು ಗೌರವಿಸಿ, ವಿರೋಧ ಪಕ್ಷದಲ್ಲಿ ಕೆಲಸ ಮಾಡಲಾರದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಸದರಾಗಿ ಮಂತ್ರಿಯಾಗಲು ಹೊರಟರು.
* ನಂತರ ಸರ್ಕಾರದ ಶಾಸಕರ ಚೆನೈ, ಗೋವಾ ಪ್ರವಾಸ ಮಾಡಿಸಿ, ಗೊಂದಲದ ಗೂಡಾಗಿಸಿದರು.
* ಮತ್ತೊಮ್ಮೆ ಶಾಸಕರಾಗಲು ಯತ್ನ ನಡೆಸಿದರು.
* ಒಂದಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದರು
* ಧರ್ಮಸ್ಥಳದ  ಆಣೆ ಪ್ರಮಾಣಗಳ ಪರ್ವ
* ಅಮರಣ  ಉಪವಾಸ (22 ಗಂಟೆಗಳಿಗೆ ಮುಕ್ತಾಯ,  ಅಷ್ಟರಲ್ಲಿ ಅದನ್ನು ಅಂತ್ಯ ಗೊಳಿಸಲು ಏನೇಲ್ಲಾ ಪ್ರಹಸನಗಳು)
ದೆಹಲಿಯಲ್ಲಿ 75 ವರ್ಷ ವಯಸ್ಸಿನ ಅಜ್ಜ (ಅಣ್ಣಾ ಹಜಾರೆ) 12 ದಿನಗಳಿಂದ  ಊಟವಿಲ್ಲದೇ ಉಪವಾಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಅವರು ಇನ್ನೂ ಮುಗಿಸಿಲ್ಲ.............)
ಹಿಂದೆ ಅಣ್ಣಾ ಹಜಾರೆಯವರ  ಉಪವಾಸ ಸಂದರ್ಭದಲ್ಲಿ  ನಕಲಿ  ಗಾಂಧಿವಾದಿಗಳು ಅಂತ ಹೇಳಿಕೆ ಕೊಟ್ಟು ನಂತರ ಕ್ಷಮೆ ಯಾಚಿಸಿದ್ದರು

ಇಷ್ಟೆಲ್ಲಾ ಆತುರದ ನಿರ್ಧಾರಗಳು ಯಾಕೋ :
ತಾವು ಜನರ ಮನಸ್ಸಿಂದ ಮರೆತು ಹೋಗುತ್ತೇನೆ ಅನ್ನೋ ಕಳವಳನಾ?
ಅಥವಾ ಸದಾ ಸುದ್ಧಿಯಲ್ಲಿರಬೇಕು ಅನ್ನೋ ಮನದಾಸೆಯಾ ?

ಈ ದೇಶದಲ್ಲಿ ಯಾರೂ ಪ್ರಾಮಾಣಿಕರಲ್ಲ ಅವರ  ಮಾತಿಗೆ ಅವರು ಅವರ ಬಗ್ಗೆ ಹೇಳಿಕೊಳ್ಳಲಿ.
ಈ ರಾಜ್ಯದಲ್ಲಿ, ಈ ದೇಶದಲ್ಲಿ ಜನ ಸಾಮಾನ್ಯರೂ ಪ್ರಾಮಾಣಿಕರಾಗಿಯೇ ಇದ್ದಾರೆ. ಕಷ್ಟಪಟ್ಟು ದುಡಿಯುತ್ತಾರೆ, ಹೊಟ್ಟೆತುಂಬಾ ಊಟ ಮಾಡುತ್ತಾರೆ, ಕಣ್ತುಂಬ ನಿದ್ರೆ ಮಾಡುತ್ತಾರೆ. ಯಾರಿಗೂ ಕೇಡನ್ನು ಮಾಡದೇ ಪರರಿಗೆ ಉಪಕಾರಿಗಳಾಗಿ ಮತ್ತೊಬ್ಬರ  ವಸ್ತುವಿಗೆ, ಹಣಕ್ಕೆ ಆಸೆ ಪಡದ ನಮ್ಮಂತಹ ಕೋಟಿ ಜನರು ಇದ್ದಾರೆ. 
ಯಾವ ರಾಜಕಾರಣಿ, ಯಾವ ಭ್ರಷ್ಟ  ಅಧಿಕಾರಿ, ಭ್ರಷ್ಟಾಚಾರಿ, ನೆಮ್ಮದಿಯಿಂದ  ಇದ್ದಾನೆ. ಹೇಳಲಿ ಆತ್ಮಸಾಕ್ಷಿಯಾಗಿ, ತನ್ನ ಹಾಗೆ ಎಲ್ಲರೂ ಅಂತ ತಿಳಿದುಕೊಳ್ಳುವುದು ಸರಿಯಾದ ಭಾವನೆಯಲ್ಲ.

ಇದೆಲ್ಲಾ ಬಿಟ್ಟು ಈ ಐದು ವರ್ಷದಲ್ಲಿ  ಕಳೆದುಕೊಂಡಿರುವ ತನ್ನ ವರ್ಚಸ್ಸನ್ನು, ತನ್ನ ಪಕ್ಷದ ಬಲವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡಬಹುದಿತ್ತು. ಈ ಮೂರು ವರ್ಷವೂ ಹಾಗೆ ಅರೋಪಗಳನ್ನು ಮಾಡುತ್ತಲೇ ಕಾಲ ಕಳೆದರು ಹೇಗೋ ಹತ್ತಿಪ್ಪತ್ತು ಸಿಟು ಗಳಿಸಿದರೆ ಯಾವುದಾದರೂ ಒಂದು ಪಕ್ಷದ ಜೊತೆ ಕೈ ಜೋಡಿಸಬಹುದು ಎಂಬ ಲೆಕ್ಕಾಚಾರ ವಿರಬಹುದು. ಅದು ಬಿಟ್ಟು ತನ್ನ ಪಕ್ಷವನ್ನು ಶಕ್ತಯುತವಾಗಿ ಮಾಡಿ ತನ್ನ ಪಕ್ಷವನ್ನು ಅಧಿಕಾರಕ್ಕೆ ತರವ ಪ್ರಯತ್ನಕ್ಕೆ ಸಾರಥಿಯಾಗುವವನೆ ನಿಜವಾದ ಸೇನಾನಿ. ಅದು ಬಿಟ್ಟು
ಏನೋ ಹೇಳ ಬೇಕು ಅಂತ ಹೇಳಿಕೆ ಕೊಡುತ್ತಾ ಹೋದರೆ ನಾವು ಯಾರನ್ನು ನಂಬಬೇಕು.
ಇವರುಗಳ  ಈ ಕಿರುಕುಳ ಮಾನಸಿಕ ಹಿಂಸೆಯ ಹೊಡೆತಕ್ಕೆ  ಪ್ರಾಮಾಣಿಕರು ಮುಂದೆ ಬರಲು ಹಿಂಜರಿಯುತ್ತಾರೆ.
 ಇದಕ್ಕೆ ನಮ್ಮ ದುರಾದೃಷ್ಟವಾ????????????????

ಈ ಆರೋಪಕ್ಕೆ ಸಂತೋಷ್ ಹೆಗಡೆಯವರು ಉತ್ತರ ಕೊಟ್ಟಿದ್ದಾರಂತೆ
"ನನಗೆ ಇರುವುದು ಒಂದೇ ಮನೆ, ಒಂದೇ ಹೆಂಡತಿ, ನಾನು ರಾತ್ರಿ ನೇರವಾಗಿ ಮನೆಗೇ ಹೋಗುತ್ತೇನೆ ಅನ್ನೋ ಉತ್ತರ ಕೊಟ್ಟಿದ್ದಾರೆ ಅನ್ನೋ ವರದಿಯನ್ನು ನಮ್ಮ "ನೇರ ದಿಟ್ಟ ನಿರಂತರ" ಸುವರ್ಣ ವಾಹಿನಿಯಲ್ಲಿ ಸಂಜೆ ತುಣುಕಿನಲ್ಲಿ ಇಣುಕಿತು"




No comments:

Post a Comment